Saturday, November 9, 2019




ಕೈ ಕುಯ್ದುಕೊಂಡು
ಎದೆ ಮೇಲೆ ಹಚ್ಚೆ ಹಾಕಿಸಿಕೊಂಡು
ಉಡಾಳ ಗೆಳೆಯ ನ ಗಾಡಿ
ತಗೊಂಡು
ನೀ ಬರೋ ಹಾದೀಲಿ
ಅಡ್ಡಡ್ಡ ಹಾಕಿ ಐ ಲವ್ ಯೂ
ಅಂತ ಹೇಳೋ  ಪಾಲ್ತು
ಹುಡುಗ ನಾನಲ್ಲ!
ಅಷ್ಟಕ್ಕೂ  ಹಾಂಗ ಹೇಳೋ
ಧೈರ್ಯ ನೇ ನನಗಿಲ್ಲ. ಅಸಲಿಗೆ ಕಾಲೇಜ್ ತುಂಬಾ ಸೈಲೆಂಟ್ ಹುಡುಗ ಅನಿಸಿಕೊಂಡು ಲೆಕ್ಚರರ್ ಗಳಿಗೆಲ್ಲ ವಿಧೇಯ ವಿದ್ಯಾರ್ಥಿ ಎನಿಸಿಕೊಂಡು ಇರೋಬರೋ ಇಂಟರ್ನಲ್ಸ್ ಎಲ್ಲಾ ನನ್ನ ಹೆಸರಿಗೆ ಬರೆಯಿಸಿಕೊಳ್ಳುವ ಬಂಗಾರದಂತ  ಹುಡುಗ ನಾನು.
ಬೇಕಂದ್ರ   "ಕಾರ್ಗತ್ತಲ ಅಮವಾಸ್ಯೆ ದಿನ ಚಂದ್ರ ನ ಕಲ್ಪಿಸಿಕೊಂಡು ಅಂಗಳದೊಳಗೆ ಬೆಳದಿಂಗಳ  ಬರಮಾಡಿಕೊಂಡು ಬೆಣ್ಣೆಯಂಥ ಸುಂದರಿ ಯನ್ನು  ಮನಸ್ಸಿನ ಮಂದಿರದಲ್ಲಿ  ಮೂಡಿಸಿಕೊಂಡು ಚಂದದ ಕವನ ಬರೆದುಬಿಟ್ಟೇನು! "
ಮೊನ್ನೆ ಕಾಲೇಜ್ functionಲ್ಲಿ ಸ್ವರಚಿತ ಕವನ ಸ್ಪರ್ಧೆಯಲ್ಲಿ ನಾ ವಾಚಿಸಿದ ಕವನ  "ಮರೆತೆನೆಂದರೆ ಮರೆಯಲಿ ಹೆಂಗ, ಸಜ್ಜನ ಸೃಜನಿ ಸಾಜನಿ ಸಂಗ"  ಅಂತ,   ಅದು ಸುಮ್ನೆ ನಿನ್ನ ಕುರಿತೇ ಬರೆದದ್ದು.

        ಅವತ್ತು ಯೂನಿಫಾರಂ ಧರಿಸದೇ ಕಾಲೇಜ್ ಗೆ ಬಂದಾಗ ಸರ್ ನಿನ್ನನ್ನು  ಹೊರಗಡೆ ನಿಲ್ಲಿಸಿದ್ದರು. ನಾನು ಕಿಡಕಿಯಿಂದ ನಿನ್ನ ನೋಡಿ ನಕ್ಕಿದ್ದೇ ಬಂತು.
ನಾ ಎಷ್ಟು  ವಿಧೇಯ ವಿದ್ಯಾರ್ಥಿ ಅಂತ  ನನ್ನ ಮೇಲೆ ನನಗೆ ಅಭಿಮಾನ  ಬಂದಿತ್ತು.
 ಆದ್ರ  ಸರ್  ಮೇಲೆ ನನಗೆ ಸಿಟ್ಟು ಬಂದಿತ್ತು ನೋಡು ನಿನ್ನ ಹೊರಗೆ ನಿಲ್ಲಿಸಿದ್ದಕ್ಕೆ.

       ಮೊದಲೆಲ್ಲ  ಸರ್ ಮೇಲೆ ವಿಪರೀತ ಅಭಿಮಾನ ಇರುತ್ತಿತ್ತು.  ಅವರನ್ನು ಕಣ್ಮನಗಳೆರಡೂ  follow ಮಾಡುತ್ತಿದ್ಧವು.  ನಮಗೆ ಅವರೇ ಹೀರೋ ಆಗಿದ್ದರು‌. ಈಗಂತೂ ಕೆಲವು ಸರ್ ಗಳು ವಿಲನ್ ಆಗ್ಯಾರ ನೋಡು. ಅಷ್ಟೆಲ್ಲ  ಸರ್ ಗಳೊಳಗ ಒಬ್ಬರೇ ನನಗೆ ಹೀರೋ ತರ ಕಾಣಿಸ್ತಾರೆ ನೋಡು.  ಒಂದೊಂದು ಸಾರಿ ಅವರೂ ಕೂಡ ಪಂಚ್ ಕೊಡ್ತಾರೆ. ಆ ಪಂಚ್ ತಡೆದುಕೊಳ್ಳಾಕ ಮೀಟರ್  ಬೇಕು.  ನಾನು ಹೀರೋ ಆದರೂ  ಆ ಸರ್ ನನಗೆ ಹೀರೋ .
ನನ್ನ ಬೆಂಚ್ ನ  ಮುಂದೆ ನೀ ಹಾಯ್ದು ಹೋದಾಗ   ನನ್ನ ಜೀವ ಬಾಯಿಗೆ ಬಂದಂಗ ಆಗ್ತಿತ್ತು!    ಹಸಿರಂಚಿನ  ಗರಿ ಗರಿ ಲಂಗ ಬೀಸಿ ತಂದ ಗಾಳಿ ನನ್ನೆದೆಗೆ ಆಮ್ಲಜನಕ ಕೊಟ್ಟಂಗಾಗಿತ್ತು.  ಯವ್ವಿ ಯವ್ವಿ  ಯವ್ವಿ!    ಅಷ್ಟು ಸಾಕಾಗಿತ್ತು   ಈ  ಜೀವಕ್ಕೆ!
                     ನಿನಗೆ ಗೊತ್ತೆ? ಮೊನ್ನೆ ದೀಪಾವಳಿ ಹಬ್ಬಕ್ಕೆ ಮನೆ ಸ್ವಚ್ಛ ಮಾಡುವಾಗ ಹಳೆ ಪೇಪರ್ ಎಲ್ಲ ಗುಡಿಸುತ್ತಿದ್ದೆ. ಒಂದು ಮಡಿಚಿದ ಪೇಪರ್ ಕಣ್ಣಿಗೆ ಬಿತ್ತು.  ತೆಗೆದು ನೋಡಿದೆ.  ಉಪ್ಪಿನ ಕಾಯಿ ಭರಣಿ ತೆಗೆದಾಗ ಬರುವ ಘಮಲು ಮೂಗಿಗೆ ಬಂತು. ಕನ್ನಡ ಶಾಲೆ ಗೆ ಹೋಗುವಾಗ
"  ನೀನೊಂದು ಮನೆ  ನಾನೊಂದು ಮನೆ  ನಮ್ಮಿಬ್ಬರ ಮನೆ ಮೈಸೂರು ಅರಮನೆ" ಎಂದು ಬರೆದದ್ದು ನೋಡಿ ನಗು ಬಂತು. ಎಂಥಾ  ಎಳೆ ಮಾವಿನ ಚಿಗುರಿನಂಥ ಪ್ರೇಮ??! ಅರಸ ಯಾರು ಅರಸಿ ಯಾರು? ಎಂದೇ ಅರಿಯದ  ಕನಸಲೂ ಅರಿಯದ ಅರಮನೆಯನ್ನು ಕಲ್ಪಿಸುವ ಬಾಲ್ಯ ಪ್ರೇಮ!!

  ಮುಂದಿನ ವಾರ ಸೆಮಿಸ್ಟರ್ ಪರೀಕ್ಷೆ  ಶುರುವಾದವು. ನಿನ್ನ ನೆನಪಿಸಿಕೊಂಡು ಕೂತರೆ " ಹಿಂದಿನದು ನೆನೆಸಿಕೊಂಡು ಹಿತ್ತಲದೊಳಗೆ ಅತ್ತಂಗ" .
    ನಿನಗೆ ಗೊತ್ತೇನು ಸೆಮಿಸ್ಟರ್ ರಿಸಲ್ಟ ಬಂದಾಗ ಗೆಳೆಯರು ತಮ್ಮ ರಿಸಲ್ಟ್ ನೋಡುವದಕ್ಕಿಂತ ಮೊದಲು ನನ್ನ ರಿಸಲ್ಟ್  ನೋಡ್ತಾರೆ.  Time ಆಯ್ತು  ಇವತ್ತಿನ target reach ಆಗಿಲ್ಲ ಇನ್ನು.  ಮುಂದಿನ ವಾರ ಪರೀಕ್ಷೆದಾಗ ಸಿಗೋನಲ್ಲ!!!?!.

Tuesday, November 5, 2019

History. Andra Haanga !!!!!






 

                         


ಈ  History  ಅಂದ್ರೇನೇ  ಹಾಂಗ!!  ತಿಳಿಯುವ ಕುತೂಹಲವಿದ್ದರೆ,  ಓದುವ ಆಸಕ್ತಿಯಿದ್ದರೆ, ಮೆಚ್ಚುವ ಮನ¸  EzÀÝgÉ ಮಾತ್ರ ಇಷ್ಟವಾಗೋದು  ಇಲ್ಲದಿದ್ದರೆ ಬೋರೋ ಬೋರ್!!  ನನ್ನ ಕಾಲೇಜ್ ಕಾಮರ್ಸ ಹುಡುಗರು   history  ಅಂದ್ರೆ ಸತ್ತ ವಿಷಯವನ್ನು ಬದುಕಿದವರಿಗೆ ಹೇಳೋದು ಅಂತಾ  kindle  ಮಾಡ್ತಾರೆ.  ಆಶ್ಚರ್ಯ ವೆಂದರೆ ಸತ್ತ ಮೇಲೇನೇ history create  ಆಗೋದು‌. ಅವರಿಗೇನು ಗೊತ್ತು!!
ಬದುಕಿನ  ವ್ಯಂಗ್ಯ ಏನೆಂದರೆ ಬದುಕಿದಾಗ ಮಾಡಿದ ಸಾಧನೆಗೆ ಹೂ ಹಾರ ಕೊಟ್ಟು ಸನ್ಮಾನಿಸಿದವರಿಗಿಂತ    ಗೋರಿಯ ಮೇಲೆ  ಹಾಕಿ ಸನ್ಮಾನಿಸುವವರೇ  ಹೆಚ್ಚು !!
ದಿನದ   ಮೊದಲ ಪೀರಿಯಡ್ ಗಳಲ್ಲಿ ವಿದ್ಯಾರ್ಥಿಗಳಲ್ಲಿ ಇರುವ ವಿಷಯ ಸ್ವೀಕರಣಾ ಅಸಕ್ತಿ ಬರು ಬರುತ್ತಾ ನಾಲ್ಕು ಐದನೇ ಅವಧಿಗೆ ಕಡಿಮೆಯಾಗುತ್ತದೆ.  ಅಷ್ಟೊತ್ತಿಗೆ ಹೊಟ್ಟೆ ತಾಳವನ್ನೂ ಹಾಕುತ್ತಿರುತ್ತದೆ.  ಇತಿಹಾಸ ವಿಷಯದ ನನ್ನ ಪೀರಿಯಡ್ ಗಳು  ನಾಲ್ಕು  ಐದನೇ ಪೀರಿಯಡ್ ಗಳೇ   ಜಾಸ್ತಿ ಇದ್ದು ವಿದ್ಯಾರ್ಥಿಗಳ  ಮನಸ್ಸನ್ನು ಹಿಡಿದಿಡುವದೇ ಪ್ರೊಫೆಸರ್ ಗಳಿಗೆ ದೊಡ್ಡ ಸವಾಲು.
ಬೋರ್  ಆದ ಮನಸ್ಸುಗಳಿಗೆ  ಪಾಠ ಮಾಡಲು  ನಾನು ಭಿನ್ನ ತಂತ್ರಗಳಿಗೆ ಮೊರೆ ಹೋಗದಿದ್ದರೆ  ವಿದ್ಯಾರ್ಥಿಗಳು ಮನೆಗೆ ಹೋಗುತ್ತಾರೆ. ಹೀಗೆ ಆಸಕ್ತಿ ಮೂಡಿಸಲು ಪಾಠದ ಮಧ್ಯ ದಲ್ಲಿ ಕೆಲವು  G K ಪ್ರಶ್ನೆ ಗಳನ್ನು, ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಪ್ರಶ್ನೆಗಳನ್ನು ಕೇಳುವದರ ಮೂಲಕ,  Motivational short story ಹೇಳುವದು, live example ಗಳನ್ನು ಕೊಡುವದು ಮತ್ತು  ಕನ್ನಡ ಸಾಹಿತ್ಯದ ಕೆಲವು ಸಾಲುಗಳನ್ನು ಸಾಂದರ್ಭಿಕವಾಗಿ ಬಳಸುವದುಂಟು. ಅದು ಕೇವಲ ನನ್ನ ಆಸಕ್ತಿ ಯಷ್ಟೇ ಅಲ್ಲ  ವಿದ್ಯಾರ್ಥಿಗಳು ಸಾಹಿತ್ಯವನ್ನು ಓದಲಿ ಮತ್ತು modern world ಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಲಿ,  ZÁjvÀæöå,  ¥ÁæªÀiÁtÂPÀvÉ ಅಳವಡಿಸಿಕೊಂಡು ಗಲ್ಲಿಗಲ್ಲಿಗೊಂದು ನಿರ್ಮಾಣ ವಾಗುತ್ತಿರುವ  ಪೋಲೀಸ್ ಸ್ಟೇಷನ್ ಗಳನ್ನು ಮತ್ತು ಪೋಲೀಸ್ ರ ಸಂಖ್ಯೆಯನ್ನು ಕಡಿಮೆಗೊಳಿಸಲಿ  ಅಂತ ಅಷ್ಟೇ!!
                      ವಿಷಯಗಳನ್ನು ಒಂದನ್ನೊಂದು  ಸಹಸಂಬಂಧಿಸಿ    (correlation )  ಹೇಳೋದು  ಬೋಧನಾ ಪದ್ಧತಿಗಳಲ್ಲೊಂದು. ಕನ್ನಡ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ  ಹೀಗೆ ಬೇರೆಬೇರೆ ವಿಷಯಗಳ ಜೊತೆ ಇತಿಹಾಸವನ್ನು  ಸಹಸಂಬಂಧಿಸಿ ಹೇಳುವದನ್ನು ಬಿ.ಇಡಿ.ಕಲಿಯುವಾಗಲೇ ಕಲಿತಿದ್ದೆ.
ಹೀಗೆಯೇ ಮಧುರ ಚೆನ್ನ ರು  ಗೋಲಗುಮ್ಮಟದ ಬಗ್ಗೆ ಬರೆದ ಚುಟುಕು

   " ಏಳು ಗುಮ್ಮಟವೇ ಏಳು
    ಏಳು ಮಾತಿನ ಗುಮ್ಮಟವೇ
                  ಏಳು
   ನೀ ಎದ್ದರೆ, ಕನ್ನಡವೇ ಎದ್ದೀತು
   ಗೋರಿಗಿಷ್ಟು ಬೆಲೆ ಕೊಟ್ಟವರು
  ಬಾಳಿಗೆಷ್ಟು ಬೆಲೆ ಕೊಟ್ಟಿದ್ದರು
  ಎಂಬುದನ್ನು ನಡೆದು ತೋರಿಸಲು
            ನೀ ಏಳು"  
    ಎಂಬ ಸಾಲುಗಳನ್ನು ಬಹುಮನಿ ಸಾಮ್ರಾಜ್ಯದ  ಕೊಡುಗೆಗಳನ್ನು ವಿವರಿಸುವ  ಸಂದರ್ಭಗಳಲ್ಲಿ        ಹೇಳಿದ್ದುಂಟು.   ಏಕೀಕರಣ ಚಳುವಳಿ ಪಾಠದಲ್ಲಿ ಹುಯಿಲಗೋಳ ನಾರಾಯಣರಾಯರ 
              "   ಉದಯವಾಗಲಿ ನಮ್ಮ ಚಲುವಕನ್ನಡ ನಾಡು"   ವಿಜಯನಗರ ಸಾಮ್ರಾಜ್ಯದ       ಪಾಠದಲಿ     " ಕೇಳಿಸದೇ ಕಲ್ಲು ಕಲ್ಲಿನಲಿ  ಕನ್ನಡ ನುಡಿ,
      ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ "      ಎಂಬ ಸಾಲುಗಳು,   ಹಾಗೆಯೇ ಕನ್ನಡ  ಸಾಹಿತ್ಯದ ಅಲಂಕಾರಗಳು, ಉಪಮೇಯ ಉಪಮಾನ ಮುಂತಾದ ಉದಾಹರಣೆಗಳನ್ನು ಕೊಡುತ್ತಾ ಪಾಠ ಮಾಡುವದು ನನ್   ಹವ್ಯಾಸ.    ಇತ್ತೀಚೆಗೆ ರೈಲ್ವೆ ಫ್ಲಾಟಫಾರಂ ನಿಂದ ಬಾಲಿವುಡ್‌  ಬದುಕಿಗೆ Life ನ sim card ಬದಲಿಸಿಕೊಂಡ, ಜೀವನ ಯಾವಾಗ ಬೇಕಾದರೂ, ಹೇಗೆ ಬೇಕಾದರೂ ಬದಲಾಗಬಹುದು ಎನ್ನುವದಕ್ಕೆ ತಾಜಾ ಮತ್ತು live  ಉದಾಹರಣೆಯಾದ   "ರಾನು ಮೊಂಡಲ್" ರ  
 "ತೇರೀಈ
  ಮೇರೀಈ
ತೇರೀಈ    ಮೇರೀಈ
ತೇರಿ ಮೇರಿ ಕಹಾನಿ"
ಗೀತೆಯನ್ನು ಯಮಕಾಲಂಕಾರಕ್ಕೆ ಉದಾಹರಣೆ ಹೇಳಿ ನನ್ನ profession ಜೀವಂತ ( live)ವಾಗಿರಿಸಲು   ಪ್ರಯತ್ನಪಟ್ಟಿರುವೆನು. 

       ಅಂದು ಶನಿವಾರವಾದ್ದರಿಂದ  half day  Class ಮುಗಿಸಿ  ಅವಸರಿಸಿ ಬಸ್ ಹತ್ತಿ ಊರಿನ ದಾರಿ ಹಿಡಿದೆ.   ಬೀಳಗಿ ಯಿಂದ ಸ್ವಲ್ಪ  ದೂರ ಕ್ರಮಿಸಿತು.  ಮುಂದಿನ ಸೀಟ್ ನಿಂದ ನಡೆದ ಮಾತುಕತೆ
ನನ್ನ ನೀಲಿ ನಯನದಲಿ ಓಲಾಡಿ  ತೂಗುಯ್ಯಾಲೆ ಆಡಬೇಕೆಂದು ಮೆತ್ತಗೆ ಹತ್ತಿರ ಬರಲು ಹವಣಿಸುತ್ತಿದ್ದ  ನಿದ್ರಾದೇವಿ  ಹೇಳದೇ ಹಿಂಜರಿದು ನನ್ನ ನಿದ್ದೆ ಕೆಡಿಸಿದಳು.  ಮೆತ್ತಗೆ ಗಮನಿಸಿದೆ ಅದು ಕಾಲೇಜ್ ಹುಡುಗರ ಸಂಭಾಷಣೆಯಾಗಿತ್ತು.   ಅದರೂ ಸುಮ್ಮನೆ ಕಣ್ಣುಮುಚ್ಚಿ ಬೆಕ್ಕು ಧ್ಯಾನಕ್ಕೆ ಕುಳಿತಂತೆ ಕುಳಿತುಕೊಂಡಿದ್ದೆ. ಆ ಹುಡುಗರ ಪರಸ್ಪರ ಸಂಭಾಷಣೆ ಹೀಗೆ ಸಾಗಿತ್ತು.  ಅದರಲ್ಲೊಬ್ಬ
"ಹಾಂಗಲ್ಲಲೇ ಹನುಮ,   ಮೊನ್ನೆ ಸರ್ ಕ್ಲಾಸ್ ಗೆ  ಬಂದರಪಾ.  ನಾನು ಮೊದಲೇ ಊಹೆ ಮಾಡಿದ್ದೆ. ಏನಾದರೂ ಪ್ರಶ್ನೆ ಕೇಳಿಯೇ  ಪಾಠ ಶುರು ಮಾಡ್ತಾರ ಅಂತ‌ . ಬಂದ ತಕ್ಷಣ     
"siblings ಅಂದ್ರ ಏನು?" ಅಂತ ಕೇಳಿದರು. ಯಾರೂ ಉತ್ತರ ಹೇಳಲಿಲ್ಲ. ಹುಡುಗಿಯರಾದರೂ ಹೇಳ್ತಾರಪಾ ಅಂದ್ರ ಅವು ಹೇಳಲಿಲ್ಲ. ಸರ್ ಒಂದು clue ಕೊಟ್ಟರು. 
"ರಾಜಕುಮಾರ, ಅಂಬರೀಷ,
ಅಭಿಜಿತ್ ಕೂಡಿ ನಟಿಸಿದ  ಕೌಟುಂಬಿಕ ಚಲನಚಿತ್ರ" ಎಂದರು.   
ನಮಗೆಲ್ಲ ಕಿಚ್ಚ ಸುದೀಪ, ಡಚ್ಚು ಬಾಸ್ , ಅಲ್ಲು ಅರ್ಜುನ್ ಇವರ ಸಿನೆಮಾನ ಜಾಸ್ತಿ ನೋಡಿದ್ದು. ರಾಜಕುಮಾರ್ ಪಿಕ್ಚರ್ ಎಲ್ಲಿ ನೆನಪಾಗ್ತವೆ??
ಉತ್ತರ ಗೊತ್ತಾಗಲಿಲ್ಲ. ಲಾಸ್ಟ ಬೆಂಚ್ ನಾಗ ಕೂತಿದ್ದ ಗಿರಿಸಾಗರದ ಮಲ್ಲ "ಒಡಹುಟ್ಟಿದವರು" ಅಂತ ಹೇಳಿದ. 
ಸರ್ "ಹೌದು" ಅಂದರು.
"ಮತ್ತೆ  ಸಹೋದರಿಗೆ ಇಂಗ್ಲಿಷ್ ನಲ್ಲಿ ಏನಂತ ಕರೀತೀರಿ"
ಅಂದರು.
ಎಲ್ಲಾರು sister ಅಂತ್ಹೇಳಿ ಹೇಳಿದಿವಿ.
   Sister ಅಂದ್ರ ಸಹೋದರಿ ಅಂತ ಸರಿ .
"ಸಹೋದರಿ ನಿಮಗಿಂತ ದೊಡ್ಡವರಾಗಿದ್ದರೆ ಕನ್ನಡಲ್ಲಿ ಏನಂತ ಕರೆಯುವಿರಿ "
ಅಂದರು. ನಾವೆಲ್ಲ ಖುಷಿಯಿಂದ ಅಕ್ಕ  ಎಂದೆವು.
"ಹಾಗಿದ್ದರೆ ನಿಮ್ಮ ಅಕ್ಕನ ಹೆಸರು ಮಹಾದೇವಿ ಆಗಿದ್ದರೆ ?"   ಎಂದರು.  ನಮಗರಿವಿಲ್ಲದೇ  
"ಅಕ್ಕ ಮಹಾದೇವಿ" ಎಂದೆವು. ಹಾಗಿದ್ದರೆ ಇವತ್ತು ಅಕ್ಕಮಹಾದೇವಿ ಪಾಠ ಅಭ್ಯಾಸ ಮಾಡುವ ಎಂದು ಬೋರ್ಡ್ ಮೇಲೆ "ಅಕ್ಕಮಹಾದೇವಿ" ಅಂತ ಬರೆದು ಪಾಠ ಶುರುಮಾಡಿದರು.  ನನಗ ಪ್ರಾಣೇಶ ಮಾಮಾನ ಜೋಕ್ ನೆನಪಾಯ್ತಪಾ.
" ಅಕ್ಕಮಹಾದೇವಿಯು ಚನ್ನಮಲ್ಲಿಕಾರ್ಜುನನ್ನು ಏಕೆ ಮದುವೆಯಾದಳು"?  ಅಂತ.  ಸರ್ ಏನಾದರೂ ಆ ಪ್ರಶ್ನೆ ಕೇಳಿದ್ದರೆ  ನಾನು decide
ಮಾಡಿದ್ದೆ ನೋಡು 
" ಅದು ಆಕಿನ ಇಷ್ಟ ರಿ ಸರ್, ಅದನ್ನು ಕೇಳಾಕ ನಾವ್ಯಾರು , ನೀವ್ಯಾರು? "  
ಅಂತ ಹೇಳಾಣ ಅಂತ.
ಆದ್ರ ಸರ್ ಆ ಪ್ರಶ್ನೆ ಕೇಳಲಿಲ್ಲ.
ಸರ್  ಏನು ಹೇಳಬೇಕು ಅಂತ  ಅನಕೊಂಡಿರ್ತಾರ ಅದನ್ನು ನಮ್ಮ ಬಾಯಿಯಿಂದ ತೆಗೀತಾರ. 
History ಅಂದ್ರನ ಗಿಚ್ಚ ನೋಡು " ಅಂದ.

ಮತ್ತೊಬ್ಬ ಶುರು ಮಾಡಿದ.
"  ಅಲ್ಲ ಲೇ ಬಸ್ಯಾ, ಕಾಳಿದಾಸ ಕಾವ್ಯ ಬರೆದಾನಲ್ಲ,
" ಮೇಘಸಂದೇಶ"  ಅದರಲ್ಲಿ  ಮೋಡಗಳು ಪ್ರೇಮಸಂದೇಶಗಳನ್ನು ತಗೊಂಡು ಹೋಗಿ ಪ್ರಿಯತಮೆಗೆ ಮುಟ್ಟಿಸುತ್ತಿದ್ದವಂತೆ.  ನಮ್ಮ ಕೈಯಾಗ  ಸ್ಮಾರ್ಟ ಫೋನ್ ಅದಾವಲೆ,
msg ಕಳಿಸಿದರೆ  ಅವರ ಮನ್ಯಾಗ ಯಾರಾದರೂ ಓದಿ ಬಿಟ್ಟಾರು ಅಂತ  ಭಯದಿಂದ msg ಕಳಿಸಿಲ್ಲ.  ಕಾಳಿದಾಸ ಈಗೇನಾದರೂ ಇದ್ದಿದ್ದರೆ   ಹತ್ತು ಸಾವಿರ ಕೊಟ್ಟು ಫೊನ್ ತಗೋಳ್ಳೊ ಬದಲು ಕಾಳಿದಾಸನನ್ನೇ msg ಮುಟ್ಟಿಸಾಕ ಬುಕ್ ಮಾಡ್ತಿದ್ದೆ " ಅಂದ.  
ಕಿಟಕಿ ಬಾಜು ಕುಳಿತಿದ್ದ
ಮೂರನೇ ಹುಡುಗ ಮಧ್ಯೆ ದಲ್ಲೇ ಬಾಯಿ ಹಾಕಿ
  "  ಹಾಗಲ್ಲೋ , ಈ ಹಿಸ್ಟರಿ ಸರ್ ಏನ್  ಹೇಳ್ತಾರಲೇ? ಗಿಚ್ಚ ನೋಡು. 
ಒಂದು ತಾಸು ಹೆಂಗ ಹೋಗುತ್ತ ಅಂತಾನೆ ಗೊತ್ತಾಗಲ್ಲ.  ಬೇಂದ್ರೆ ಬರೆದ ಪದ್ಯ ,

"ನೀ ಹಿಂಗ ನೋಡಬ್ಯಾಡ ನನ್ನ ,
ನೀ  ಹಿಂಗ ನೋಡಿದರೆ ನನ್ನ 
   ತಿರುಗಿ ನಾ ಹೆಂಗ  ನೋಡಲೇ ನಿನ್ನ"
ಅಂತ ಬರೆದ ಹಾಡು, ಬೇಂದ್ರೆ ತನ್ನ girl friend ಗೆ ಬರೆದಿರಬೇಕು ಅನಕೊಂಡಿದ್ದೆ.  ಆದರೆ ಬೇಂದ್ರೆಯವರು ತಮ್ಮ ಹೆಂಡತಿ ಮುಖ ನೋಡಿ ಹಾಂಗ ಬರೆದರಂತ.  ಸರ್  ಎಲ್ಲೆಲ್ಲಿ ಸ್ಟೋರಿ ತಂದು ಹೇಳ್ತಾರಪಾ, ನಾವು ಅನಕೊಂಡಿದ್ದ ಬೇರೆ  ಅದು ಇರೋದ  ಬೇರೆ, ಹೊಗ್ಗೋ ಅವನ "
ಅಂದ. ಏಕಕಾಲಕ್ಕೆ ಮೂವರು ನಕ್ಕರು.  ಪಕ್ಕದ ಹುಡುಗ 
" ನೀ ಏನರ ಹೇಳು ದೋಸ್ತ,  ಡಿಗ್ರಿ ಅಂದ್ರ ಮಸ್ತ ಐತಿ,  ಮಜಾ ಮಾಡಾಕ  ಹೇಳೋರು ಇಲ್ಲ,
ಕೇಳೋರು ಇಲ್ಲ,
ಆದ್ರ  ವರುಷಕ್ಕ ಎರಡು ಸೆಮಿಸ್ಟರ್ ಇಟ್ಟು ತಪ್ಪು ಮಾಡ್ಯಾರ ನೋಡು" ಅಂದ.
ಅಷ್ಟೊತ್ತಿಗೆ  ಸುನಗ ಕ್ರಾಸ್ ಬಂತು.  ಹುಡುಗರು ಇಳಿಯಬೇಕು ಅಂತ ಎದ್ದು ನಿಂತರು. ನನಗೆ  ಅಚ್ಚರಿಯಾಯಿತು.   ನೋಡಿದರೆ ಅವರೆಲ್ಲ  ನನ್ನ ಕಾಲೇಜ್ ನ ೫ನೆ ಸೆಮಿಸ್ಟರ್ ವಿದ್ಯಾರ್ಥಿಗಳಾದ ಬಸಯ್ಯ , ನಾಗರಾಜ,  ಹನುಮಂತ.  ನನ್ನ ನ್ನು ನೋಡಿದ ತಕ್ಷಣ ಅವರಲ್ಲಿದ್ದ ಉತ್ಸಾಹ, ಬಲ ಎರಡೂ  ಅವರು ಬಸ್ಇಳಿಯುವದಕ್ಕಿಂತ ಮೊದಲೇ ಅವರನ್ನು ಬಿಟ್ಟು  ಇಳಿದು ಹೋಗಿದ್ದವು.  "ನಮಸ್ಕಾರ ಸರ್"  ಅಂತ  ಹೇಳಿ ನಾಚಿಕೆ ಮತ್ತು ಪಾಪಪ್ರಜ್ಞೆಯಿಂದ   ಇಳಿದು  ಹೋದರು.
"ನಾವು ಮಾತಾಡಿದ್ದು ಸರ್ ಕೇಳಿಸಿಕೊಂಡಾರ ಲೇ" ಅಂತ ಇಡೀ story ಯನ್ನು  ಇರೋಬರೋ ಗೆಳೆಯ ರಿಗೆ ಫೊನ್ ಮಾಡಿ ಹೇಳಿದ್ದೇ ಬಂತು.  
             ನನಗ    FUÀ   ಗೊತ್ತಾಯ್ತು.   ಹುಡುಗರು History ಯಾಕ  fail  ಆಗ್ತಾರ ಅಂತ?!!!!!!.    


Friday, November 1, 2019

jhhhhgggg
Benakanavari D.N.
Assistant Professor
Govt.First Grade Colleg Bilagi
Dist: Bagalkote
Cell.No. 9141211314

















 *ಮರೆತೆನೆಂದರೆಮರೆಯಲಿಹೆಂಗ*



·         "ಉದಯವಾಗಲಿನಮ್ಮಚೆಲುವ ಕನ್ನಡನಾಡು
        ಬದುಕು ಬಲು ಹಿನ ನುಡಿಯು ಸದಭಿಮಾನದಗೂಡು"
ಕಾವೇರಿಯಿಂದಮಾಗೋದಾವರಿವರೆಗಿರ್ದನಾಡದಾ
ಕನ್ನಡ" 

ಹೀಗೆ ಸಾಗಿತ್ತುನನ್ನ  2nd semester ಇತಿಹಾಸಪಾಠ . ಇದ್ದಕಿದ್ದಂತೆ ಕೊನೆಯ ಬೆಂಚಿನಲ್ಲಿ ಗದ್ದಲ ಶುರುವಾಯಿತು.   "ಯಾಕೋಸುಮ್ನೆಕೂರಿ.  Keep silence, keep silence" ಎಂದುಕೂಗಿದೆ. ಸ್ವಲ್ಪ ಶಾಂತವಾದಂತಾಯ್ತು.  ಮತ್ತೆಸಣ್ಣಗೆ ಗದ್ದಲ.  "ಯಾವನೋಅವನು, ಸುಮ್ನೆಕೂರಿ ಇಲ್ಲವೇ ಹೊರಗೆ ಹೋಗಿ" ಎಂದೆ.  ಬಿ.ಎ.ಪ್ರಥಮ ವರುಷದ ಕ್ಲಾಸ್ನಲ್ಲಿ ಹುಡುಗರ ಸಂಖ್ಯೆಗಿಂತ ಹುಡುಗಿಯರ ಸಂಖ್ಯೆಯೇ ಜಾಸ್ತಿ.  ಹುಡುಗಿಯರ ಗುಂಪಿನ ಮಧ್ಯೆ ಒಬ್ಬ ವಿದ್ಯಾರ್ಥಿನಿ ಎದ್ದು ನಿಂತು ಜೋರಾಗಿ ಅಳುತ್ತಾ  " ಸರ್ , ಅವನು ನನಗೆ ಕಾಡಿಸ್ತಾನರೀ , ಅವನಿಗೆ ಸರಿಯಾಗಿ ಹೇಳ್ರಿ" ಎಂದು ಕಣ್ತುಂಬಾ ಕೃಷ್ಣೆ ತುಂಬಿಕೊಂಡು ಕರ್ನಾಟಕದ ಏಕೀಕರಣ ಪಾಠವನ್ನು ಬೀಳಗಿಯ ಭೂಮಿಯನ್ನು ಕೃಷ್ಣೆ ತೊಳೆದಂತೆ ತೊಳೆಯಲು ಪ್ರಾರಂಭಿಸಿದಳು .  ಮೊದಲು ನಾನು ನಿರ್ಲಕ್ಷಿಸಿ "  ಜ್ಞಾನಸಂಗಮ"   teaching aid ನಲ್ಲಿ ಹುಯಿಲಗೋಳ ನಾರಾಯಣರಾವ್ರ ವರ ಉದಯವಾಗಲಿ ನಮ್ಮ ಚೆಲುವಕನ್ನಡನಾಡು ಎಂಬಹಾಡನ್ನುಮತ್ತೆ  play ಮಾಡಿದೆ. ಆದರೆ ಆ ವಿದ್ಯಾರ್ಥಿನಿ ಜೋರಾಗಿ ಅಳಲು ಪ್ರಾರಂಭಿಸಿ " ಸರ್ , ಅವನಿಗೆ ನೀವು ಹೇಳ್ತೀರೋ ಅಥವಾ Princi ಗೆ complaint ಕೊಡಬೇಕೋ" ಎಂದಾಗ ಪರಿಸ್ಥಿತಿಯ ಗಂಭೀರತೆಯನ್ನುಅರಿತೆ.  ಅಷ್ಟಕ್ಕೂ ವಿದ್ಯಾರ್ಥಿನಿ ಆರೋಪಮಾಡಿದ್ದು ನಾನು ತುಂಬಾ ಇಷ್ಟಪಟ್ಟ , ಪುಸ್ತಕ ಪ್ರವೀಣನಲ್ಲದಿದ್ದರೂ ಬದುಕಲು ಕಲಿತ , ಸಂಘಟನಾಚತುರ, ಪ್ರೌಢಿಮೆಯುಳ್ಳಹುಡುಗ ಬಸು ಎಂಬುವವನಬಗ್ಗೆ. ಸಾಮಾನ್ಯವಾಗಿ ಎಲ್ಲರಿಗೂ ತಿಳುವಳಿಕೆ ಹೇಳುವ ಹುಡುಗ ಹಳ್ಳಕ್ಕೆ ಬಿದ್ದನೇ ಎಂಬುದೇ ನನಗೆ ಆಘಾತವಾಗಿತ್ತು ಮತ್ತು ಈ ವಿಷಯವನ್ನು ನನಗೆ ಅರಗಿಸಿಕೊಳ್ಳುವದು ಕಷ್ಟವೆನಿಸಿತು.     ಇದೇ ಕಾರಣಕ್ಕೆ ವಿದ್ಯಾರ್ಥಿನಿಯ ಆರೋಪವನ್ನು ನಿರ್ಲಕ್ಷಿಸಿದೆನು.  ಆದರೆ princi ತನಕ ಹೋಗುವೆನು ಎಂಬ ವಿದ್ಯಾರ್ಥಿನಿಯ ಹೆದರಿಸುವಿಕೆಗೆ ಒಂದು ಕ್ಷಣ ನನ್ನಮನಸ್ಸನ್ನು ಹೆದರಿಸಿತು. ನಮ್ಮ ಪ್ರಿನ್ಸಿ ಯಾವಾಗ ಹೇಗೆ ಇರ್ತಾರೋ ಗೊತ್ತಿಲ್ಲ. ನಾನು profession ಗೆ ಹೊಸಬ.  ಒಂದು ವೇಳೆ ಪ್ರಿನ್ಸಿ ಹತ್ತಿರ complaint ಒಯ್ದರೆ   "ನಿಮಗೆ class room control ಮಾಡಲಾಗುವದಿಲ್ಲವೇ?"   ಎಂದು ನನಗೆ ಮಂಗಳಾರತಿ ಮಾಡುವರು ಎಂಬ ಊಹೆಯೇ  ನನ್ನನ್ನು ಬೆದರಿಸಿತು.  ಇತ್ತ ಕಡೆ ಹುಡುಗರ ಬೆಂಚಿನಲ್ಲಿ ವಿದ್ಯಾರ್ಥಿನಿಯನ್ನು ಬೆಂಬಲಿಸಿ ಒಂದು ಗುಂಪು,  ಹುಡುಗನನ್ನು ಬೆಂಬಲಿಸಿ ಒಂದು ಗುಂಪು ಗಲಾಟೆ ಶುರುಮಾಡಿದವು.  ಪ್ರತಿ ದಿನದ ಮೊದಲ ಶುಭೋದಯ ಹೇಳುವ, ಚಂದವುಳ್ಳ ಚಾರಿತ್ರ್ಯದ ಹುಡುಗ ಚಂದನಗೌಡ,  ಇವತ್ತುಹುಡುಗನ ವಿರುದ್ದವಾಗಿ ಗಲಾಟೆ ಶುರು ಮಾಡಿದ್ದ. ದುರ್ಗದಂತೆ ನಿಶ್ಚಲವಾಗಿರುತ್ತಿದ್ದ ದುರ್ಗೇಶ ಇಂದು ಒಂದು ಗುಂಪಿನ ಪರವಾಗಿ ಅರ್ಭಟಿಸುತ್ತಿದ್ದ.  ವಾರದಾಗಒಂದುಸಾರಿ  class ಗೆ ಬರುವ ವಿಠ್ಠಲ ಎದುರಾಳಿಯನ್ನು ಹಣಿಯಲು ಇದೇ ಸಮಯ ಎಂದು  ವಿದ್ಯಾರ್ಥಿನಿಯ ಪರನಾಯಕತ್ವ ವಹಿಸಿಕೊಂಡ. ಬಾಡಿಗೆಗೆ  ಅಂ ತ  ಹ್ರದಯ  ಹೊತ್ತೊಯ್ಡ ಮೌ ನಿ  ಗೆಳೆ ಯ  ಮೀ ಸೆ ಯ ಲ್ಲಿ  ಮುಗುಳ್ನಲು  ಪ್ರಾರಂಭಿಸಿದ್ದ .  ಆ ನಗುವಿನಲ್ಲೇ  ಏನೋ  ಇದೆಯೆನಿಸಿತು.  ನಾನು ಇಕ್ಕಟ್ಟಿಗೆ ಸಿಲುಕಿದ ಸಂದರ್ಭ ನೋಡಲಾಗದೇ ಅಕ್ಷಯ ಅಭಿಮಾನ ಹೊಂದಿದ್ದ ಅಕ್ಷಯಕುಮಾರ ಎದ್ದು ಹೊರನಡೆದ.  ಪುಸ್ತಕಗಳನ್ನುಹರಿದುಹಾಕಿದರು.   ಕೈಯಲ್ಲಿ cellphone ತೆಗೆದುಕೊಂಡ ಎರಡೂ ಕಡೆಯವರೂ ತಮ್ಮತಮ್ಮ ಅಡ್ಡಾದ ಪಡ್ಡೆಗಳಿಗೆ  ಫೋನಾಯಿಸಿದರುಉತ್ತರ ಭಾರತದಲ್ಲಿ ಮಾತ್ರ ಕೇಳಿ ಓದುತ್ತಿದ್ದ ಇಂತಹ ಘಟನೆ ನನ್ನ ಕ್ಲಾಸ್ನಲ್ಲಿ ,   ಇದು ಒಂಥರಾ   JNU ನಲ್ಲಿ ವಿದ್ಯಾರ್ಥಿಸಂಘಟನೆಗಳ ಕಾಳಗಳನ್ನು  ನನ್ನ ನೆನಪಿನ ಪರದೆಯ ಮೇಲೆ ಮೂಡಿಸಿತುಅಶಾಂತತೆಯನ್ನು ಹೋಗಲಾಡಿಸಿ ಗಮನ ಬೇರೆಡೆ ಹರಿಸಲು ನಿಮಗೆ ಒಂದು ಕತೆ ಹೇಳುವೆ ಕೇಳಿ ಎಂದೆಮಹಾಭಾರತಕಾವ್ಯದ
  " ಮುತ್ತುಗಳನ್ನಾಯ್ದುಕೊಡಲೇಎಂಬ quote  ಇಟ್ಟುಕೊಂಡು ಧುರ್ಯೋಧನ ಮತ್ತು ಕರ್ಣರ ಸ್ನೇಹಸಂಬಂಧ ವಿವರಣೆ ನೀಡಲು ಹೊರಟೆ.  Green board ಮೇಲೆ  "ಮುತ್ತುಗಳನ್ನಾಯ್ದುಕೊಡಲೇ?" ಎಂದು ಬರೆದು ಅದನ್ನು pronounce ಮಾಡಿದೆಒಂದು ಕ್ಷಣ ಶಾಂತವಾಗಿದ್ದ ತರಗತಿಯ ಹಿಂದಿನ ಬೆಂಚಿನ ವಿದ್ಯಾರ್ಥಿನಿಯರ ಗುಂಪಿನಿಂದ  " ಕೊಡ್ರಿ " ಎಂಬ ಉತ್ತರ ಬಂದಿತುಉತ್ತರ ಕೇಳಿ ಬೆಚ್ಚಿದಂತಾದೆಏನೋ ಎಡವಟ್ಟಾಗುತ್ತಿದೆ ಎಂದುಕೊಳ್ಳುವಷ್ಟರಲ್ಲಿ ಆರೋಪಮಾಡುತ್ತಿದ್ದ ವಿದ್ಯಾರ್ಥಿನಿ ಪೋಡಿಯಮ್  ಹ ತ್ತಿರ ಬಂದು "ಸರ್ ನನಗೆ ಕೊಡಿ ಸಿ "   ಎಂದಳು. ನನಗೆ  ಧರ್ಮಸಂಕಟ. ಇತ್ತ  ಒಳ್ಳೆಯ ಹುಡುಗನನ್ನು ಇದರಿಂದ ಪಾರು ಮಾಡಬೇಕೆಂಬ ಹಂಬಲ. ವಿದ್ಯಾರ್ಥಿನಿಗೆ ಸಮಾಧಾನ ಹೇಳಿ ಈ ಘಟನೆಯನ್ನು ಇಲ್ಲಿಗೆ ಮುಗಿಸಬೇಕೆಂಬ  ಧಾವಂತ.  ಎಲ್ಲದಕ್ಕಿಂತ ಹೆಚ್ಚಾಗಿ ಪ್ರಿನ್ಸಿ ನನಗೆ ಮಂಗಳಾರತಿ ಮಾಡುವದನ್ನು ತಪ್ಪಿಸಿಕೊಳ್ಳಬೇಕೆಂಬ ಭಯಕೊನೆಗೆಧೈರ್ಯಮಾಡಿ , "ನಾನು ಅವನಿಗೆ ಬುದ್ದಿ ಹೇಳುವೆ, ನೀವು ಸುಮ್ನೆ ಕೂರಿ ಇಲ್ಲದಿದ್ರೆ ಹೋಗಿ Princi ಹತ್ತಿರಎಂದೆಆಗ ವಿದ್ಯಾರ್ಥಿನಿ "ನೀವುಬನ್ನಿ Princi ಹತ್ತಿರ ". ಎಂದಳುನನಗೆಕೋಪಬಂದು "ಕಾಡಿಸಿದವನುಯಾರುಅವನೊ  ಅಥವಾ ನಾನೋ? ಕಾಡಿಸಿದವನ್ನುಕರೆದುಕೊಂಡುಹೋಗಿ"ಎಂದೆ. ಈ ಮಾತು  ಕೇಳಿ ಕೆಲ ಹುಡುಗರು ನಕ್ಕಿದ್ದೂ ಆಯಿತುಇಡೀ ತರಗತಿ ಗೊಂದಲದ ಗೂಡು.   ಅಷ್ಟೊತ್ತಿಗೆ ನನ್ನ ಜಂಘಾಬಲ ಉಡುಗಿ ಹೋಗಿತ್ತು. ಮೊದಲ ಮತ್ತು ಎರಡನೆಯ  ಪೀರಿಯಡ್   ಸಾo ಗ ವಾ ಗಿ  ನಡೆದ ಮೇಲೆ ಮೂರನೆಯ History  ಕ್ಲಾಸ್ನಲ್ಲಿ ಏಕೆ ಈ ವಿವಾದಎಂದು. ಸದಾ ಗುನುಗುವ ಹಾಡು ಕಂಠದಲ್ಲಿ ಬಂದು " ಬೆಳಗೆದ್ದು ನಾನು ಯಾರ ಮುಖವ ನೋಡಿದೆ, ಅಂದಾನೋ ದುರದೃಷ್ಟನೋ ಮುಂದೆ ಕೂತಿದೆ" ಎಂಬಂತಾಯಿತು. ತಕ್ಷಣವೇ ಅಮ್ಮ ನೆ ನ ಪಾ ದಳ್ .   ಕಷ್ಟಕಾಲದಲ್ಲಿ ಅವಳೊಬ್ಬಳೇ ನನ್ನ trouble shooter.  ಆರೋಪ ಮಾಡಿದ ವಿದ್ಯಾರ್ಥಿನಿಯ ಕಣ್ಣುಗಳು ಕೊಳಗಳಾಗಿದ್ದವುನನ್ನಮಾತುಗಳು 'ಅಮ್ಮ ಬೇಸಿಗೆಯಲಿ ತಾರಸಿಯ ಮೇಲೆ ಒಣಗಲು ಇಟ್ಟ ಹಪ್ಪಳದಂತೆಸಪ್ಪಗೆ ಒಣಗಿದ್ದವುತುಟಿಗಳೆರಡೂ  ಒಂದನ್ನೊಂದು ಮುನಿಸಿಕೊಂಡಿದ್ದವು. ಯಾಕೆಹೀಗಾಯ್ತು? ಹೀಗೆಯಾಕಾಯ್ತು?   ಶಾಂತ ಸಾಗರದ ಮನಸ್ಸಿನಲ್ಲಿ ಸುನಾಮಿ ಎದ್ದಿತ್ತುಅಷ್ಟೊತ್ತಿಗೆ ನನ್ನ ಪೀರಿಯಡ್ಅವಧಿ ಮುಗಿಯುತ್ತಾ ಬಂದಿತ್ತುಎಲ್ಲ. ವಿದ್ಯಾರ್ಥಿಗಳು ಎದ್ದು ನಿಂತು ಕೈಜೋಡಿಸಿ " ಕ್ಷಮಿಸಿಸರ್,  April Fool sir"  ಎಂದರುಜಾರಿದ ಜೀವ ಜೊತೆಗಿದ್ದಂತೆ ಭಾಸವಾಯಿತು.    “ದಂಡಿಗೆಹೆದರಿಲ್ಲ , ದಾಳಿಗೆಹೆದರಿಲ್ಲ , ಬೀಳಗಿಯವರ ಗಂಟೆಗೆ ಹೆದರುವೆನೇಎಂಬನನ್ನ  Ready made dailogue ನ್ನುಸಮರ್ಥಿಸಿ  ಕೊಳ್ಳಲು ದಾರಿಯೇ ಇರಲಿಲ್ಲ.“Don  ಢರ್ ಗಯಾ ''  ಎಂಬ phrase  ಹುಡುಗರ watsapp  ಗುಂಪುಗಳಲ್ಲಿ ಹರಿದಾಡಿತು. ಅವರು ಕೊಟ್ಟಆಕಸ್ಮಿಕ ಹೊಡೆತದಿಂದ ಹೊರ ಬರಲು ನನಗೆ ಆದಿನ ಪೂರ್ಣಸಾಧ್ಯವಾಗಲೇಇಲ್ಲ.    
ಇಷ್ಟೆಲ್ಲಾ ಆದಮೇಲೂ ಕಟ್ಟಕಡೆಗೆ ಉಳಿದಪ್ರಶ್ನೆ,   ''ಹೀಗೂಉಂಟೇ?!!!?  
  

ಕೈ ಕುಯ್ದುಕೊಂಡು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡು ಉಡಾಳ ಗೆಳೆಯ ನ ಗಾಡಿ ತಗೊಂಡು ನೀ ಬರೋ ಹಾದೀಲಿ ಅಡ್ಡಡ್ಡ ಹಾಕಿ ಐ ಲವ್ ಯೂ ಅಂತ ಹೇಳೋ  ಪಾಲ್ತು ಹುಡುಗ ನಾನ...