![]() |
| Benakanavari D.N. Assistant Professor Govt.First Grade Colleg Bilagi Dist: Bagalkote Cell.No. 9141211314 |
*ಮರೆತೆನೆಂದರೆಮರೆಯಲಿಹೆಂಗ*
·
"ಉದಯವಾಗಲಿನಮ್ಮಚೆಲುವ ಕನ್ನಡನಾಡು
ಬದುಕು ಬಲು ಹಿನ ನುಡಿಯು ಸದಭಿಮಾನದಗೂಡು"
ಕಾವೇರಿಯಿಂದಮಾಗೋದಾವರಿವರೆಗಿರ್ದನಾಡದಾ
ಹೀಗೆ ಸಾಗಿತ್ತುನನ್ನ
2nd semester ಇತಿಹಾಸಪಾಠ . ಇದ್ದಕಿದ್ದಂತೆ ಕೊನೆಯ ಬೆಂಚಿನಲ್ಲಿ ಗದ್ದಲ ಶುರುವಾಯಿತು. "ಯಾಕೋಸುಮ್ನೆಕೂರಿ. Keep silence, keep silence" ಎಂದುಕೂಗಿದೆ.
ಸ್ವಲ್ಪ ಶಾಂತವಾದಂತಾಯ್ತು. ಮತ್ತೆಸಣ್ಣಗೆ ಗದ್ದಲ. "ಯಾವನೋಅವನು,
ಸುಮ್ನೆಕೂರಿ ಇಲ್ಲವೇ ಹೊರಗೆ ಹೋಗಿ" ಎಂದೆ. ಬಿ.ಎ.ಪ್ರಥಮ ವರುಷದ ಕ್ಲಾಸ್ನಲ್ಲಿ ಹುಡುಗರ ಸಂಖ್ಯೆಗಿಂತ ಹುಡುಗಿಯರ ಸಂಖ್ಯೆಯೇ ಜಾಸ್ತಿ. ಹುಡುಗಿಯರ ಗುಂಪಿನ ಮಧ್ಯೆ ಒಬ್ಬ ವಿದ್ಯಾರ್ಥಿನಿ ಎದ್ದು ನಿಂತು ಜೋರಾಗಿ ಅಳುತ್ತಾ " ಸರ್ , ಅವನು ನನಗೆ ಕಾಡಿಸ್ತಾನರೀ
, ಅವನಿಗೆ ಸರಿಯಾಗಿ ಹೇಳ್ರಿ" ಎಂದು ಕಣ್ತುಂಬಾ ಕೃಷ್ಣೆ ತುಂಬಿಕೊಂಡು ಕರ್ನಾಟಕದ ಏಕೀಕರಣ ಪಾಠವನ್ನು ಬೀಳಗಿಯ ಭೂಮಿಯನ್ನು ಕೃಷ್ಣೆ ತೊಳೆದಂತೆ ತೊಳೆಯಲು ಪ್ರಾರಂಭಿಸಿದಳು
. ಮೊದಲು ನಾನು ನಿರ್ಲಕ್ಷಿಸಿ
" ಜ್ಞಾನಸಂಗಮ"
ದ teaching
aid ನಲ್ಲಿ ಹುಯಿಲಗೋಳ ನಾರಾಯಣರಾವ್ರ ವರ ಉದಯವಾಗಲಿ ನಮ್ಮ ಚೆಲುವಕನ್ನಡನಾಡು ಎಂಬಹಾಡನ್ನುಮತ್ತೆ play ಮಾಡಿದೆ. ಆದರೆ ಆ ವಿದ್ಯಾರ್ಥಿನಿ ಜೋರಾಗಿ ಅಳಲು ಪ್ರಾರಂಭಿಸಿ
" ಸರ್ , ಅವನಿಗೆ ನೀವು ಹೇಳ್ತೀರೋ ಅಥವಾ
Princi ಗೆ complaint ಕೊಡಬೇಕೋ"
ಎಂದಾಗ ಪರಿಸ್ಥಿತಿಯ ಗಂಭೀರತೆಯನ್ನುಅರಿತೆ. ಅಷ್ಟಕ್ಕೂ ವಿದ್ಯಾರ್ಥಿನಿ ಆರೋಪಮಾಡಿದ್ದು ನಾನು ತುಂಬಾ ಇಷ್ಟಪಟ್ಟ
, ಪುಸ್ತಕ ಪ್ರವೀಣನಲ್ಲದಿದ್ದರೂ ಬದುಕಲು ಕಲಿತ , ಸಂಘಟನಾಚತುರ,
ಪ್ರೌಢಿಮೆಯುಳ್ಳಹುಡುಗ ಬಸು ಎಂಬುವವನಬಗ್ಗೆ. ಸಾಮಾನ್ಯವಾಗಿ ಎಲ್ಲರಿಗೂ ತಿಳುವಳಿಕೆ ಹೇಳುವ ಹುಡುಗ ಹಳ್ಳಕ್ಕೆ ಬಿದ್ದನೇ ಎಂಬುದೇ ನನಗೆ ಆಘಾತವಾಗಿತ್ತು ಮತ್ತು ಈ ವಿಷಯವನ್ನು ನನಗೆ ಅರಗಿಸಿಕೊಳ್ಳುವದು ಕಷ್ಟವೆನಿಸಿತು. ಇದೇ ಕಾರಣಕ್ಕೆ ವಿದ್ಯಾರ್ಥಿನಿಯ ಆರೋಪವನ್ನು ನಿರ್ಲಕ್ಷಿಸಿದೆನು. ಆದರೆ
princi ತನಕ ಹೋಗುವೆನು ಎಂಬ ವಿದ್ಯಾರ್ಥಿನಿಯ ಹೆದರಿಸುವಿಕೆಗೆ ಒಂದು ಕ್ಷಣ ನನ್ನಮನಸ್ಸನ್ನು ಹೆದರಿಸಿತು.
ನಮ್ಮ ಪ್ರಿನ್ಸಿ ಯಾವಾಗ ಹೇಗೆ ಇರ್ತಾರೋ ಗೊತ್ತಿಲ್ಲ. ನಾನು
profession ಗೆ ಹೊಸಬ. ಒಂದು ವೇಳೆ ಪ್ರಿನ್ಸಿ ಹತ್ತಿರ
complaint ಒಯ್ದರೆ
"ನಿಮಗೆ class room control ಮಾಡಲಾಗುವದಿಲ್ಲವೇ?" ಎಂದು ನನಗೆ ಮಂಗಳಾರತಿ ಮಾಡುವರು ಎಂಬ ಊಹೆಯೇ ನನ್ನನ್ನು ಬೆದರಿಸಿತು. ಇತ್ತ ಕಡೆ ಹುಡುಗರ ಬೆಂಚಿನಲ್ಲಿ ವಿದ್ಯಾರ್ಥಿನಿಯನ್ನು ಬೆಂಬಲಿಸಿ ಒಂದು ಗುಂಪು, ಹುಡುಗನನ್ನು ಬೆಂಬಲಿಸಿ ಒಂದು ಗುಂಪು ಗಲಾಟೆ ಶುರುಮಾಡಿದವು. ಪ್ರತಿ ದಿನದ ಮೊದಲ ಶುಭೋದಯ ಹೇಳುವ,
ಚಂದವುಳ್ಳ ಚಾರಿತ್ರ್ಯದ ಹುಡುಗ ಚಂದನಗೌಡ, ಇವತ್ತುಹುಡುಗನ ವಿರುದ್ದವಾಗಿ ಗಲಾಟೆ ಶುರು ಮಾಡಿದ್ದ.
ದುರ್ಗದಂತೆ ನಿಶ್ಚಲವಾಗಿರುತ್ತಿದ್ದ ದುರ್ಗೇಶ ಇಂದು ಒಂದು ಗುಂಪಿನ ಪರವಾಗಿ ಅರ್ಭಟಿಸುತ್ತಿದ್ದ. ವಾರದಾಗಒಂದುಸಾರಿ class ಗೆ ಬರುವ ವಿಠ್ಠಲ ಎದುರಾಳಿಯನ್ನು ಹಣಿಯಲು ಇದೇ ಸಮಯ ಎಂದು ವಿದ್ಯಾರ್ಥಿನಿಯ ಪರನಾಯಕತ್ವ ವಹಿಸಿಕೊಂಡ. ಬಾಡಿಗೆಗೆ ಅಂ ತ ಹ್ರದಯ ಹೊತ್ತೊಯ್ಡ ಮೌ ನಿ ಗೆಳೆ ಯ ಮೀ ಸೆ ಯ ಲ್ಲಿ ಮುಗುಳ್ನಲು ಪ್ರಾರಂಭಿಸಿದ್ದ . ಆ ನಗುವಿನಲ್ಲೇ ಏನೋ ಇದೆಯೆನಿಸಿತು. ನಾನು ಇಕ್ಕಟ್ಟಿಗೆ ಸಿಲುಕಿದ ಸಂದರ್ಭ ನೋಡಲಾಗದೇ ಅಕ್ಷಯ ಅಭಿಮಾನ ಹೊಂದಿದ್ದ ಅಕ್ಷಯಕುಮಾರ ಎದ್ದು ಹೊರನಡೆದ. ಪುಸ್ತಕಗಳನ್ನುಹರಿದುಹಾಕಿದರು. ಕೈಯಲ್ಲಿ
cellphone ತೆಗೆದುಕೊಂಡ ಎರಡೂ ಕಡೆಯವರೂ ತಮ್ಮತಮ್ಮ ಅಡ್ಡಾದ ಪಡ್ಡೆಗಳಿಗೆ ಫೋನಾಯಿಸಿದರು. ಉತ್ತರ ಭಾರತದಲ್ಲಿ ಮಾತ್ರ ಕೇಳಿ ಓದುತ್ತಿದ್ದ ಇಂತಹ ಘಟನೆ ನನ್ನ ಕ್ಲಾಸ್ನಲ್ಲಿ
, ಇದು ಒಂಥರಾ JNU ನಲ್ಲಿ ವಿದ್ಯಾರ್ಥಿಸಂಘಟನೆಗಳ ಕಾಳಗಳನ್ನು ನನ್ನ ನೆನಪಿನ ಪರದೆಯ ಮೇಲೆ ಮೂಡಿಸಿತು. ಅಶಾಂತತೆಯನ್ನು ಹೋಗಲಾಡಿಸಿ ಗಮನ ಬೇರೆಡೆ ಹರಿಸಲು ನಿಮಗೆ ಒಂದು ಕತೆ ಹೇಳುವೆ ಕೇಳಿ ಎಂದೆ. ಮಹಾಭಾರತಕಾವ್ಯದ
" ಮುತ್ತುಗಳನ್ನಾಯ್ದುಕೊಡಲೇ" ಎಂಬ
quote ಇಟ್ಟುಕೊಂಡು ಧುರ್ಯೋಧನ ಮತ್ತು ಕರ್ಣರ ಸ್ನೇಹಸಂಬಂಧ ವಿವರಣೆ ನೀಡಲು ಹೊರಟೆ. Green board ಮೇಲೆ "ಮುತ್ತುಗಳನ್ನಾಯ್ದುಕೊಡಲೇ?"
ಎಂದು ಬರೆದು ಅದನ್ನು pronounce ಮಾಡಿದೆ. ಒಂದು ಕ್ಷಣ ಶಾಂತವಾಗಿದ್ದ ತರಗತಿಯ ಹಿಂದಿನ ಬೆಂಚಿನ ವಿದ್ಯಾರ್ಥಿನಿಯರ ಗುಂಪಿನಿಂದ " ಕೊಡ್ರಿ
" ಎಂಬ ಉತ್ತರ ಬಂದಿತು. ಉತ್ತರ ಕೇಳಿ ಬೆಚ್ಚಿದಂತಾದೆ. ಏನೋ ಎಡವಟ್ಟಾಗುತ್ತಿದೆ ಎಂದುಕೊಳ್ಳುವಷ್ಟರಲ್ಲಿ ಆರೋಪಮಾಡುತ್ತಿದ್ದ ವಿದ್ಯಾರ್ಥಿನಿ ಪೋಡಿಯಮ್ ಹ ತ್ತಿರ ಬಂದು
"ಸರ್ ನನಗೆ ಕೊಡಿ ಸಿ " ಎಂದಳು. ನನಗೆ ಧರ್ಮಸಂಕಟ.
ಇತ್ತ ಒಳ್ಳೆಯ ಹುಡುಗನನ್ನು ಇದರಿಂದ ಪಾರು ಮಾಡಬೇಕೆಂಬ ಹಂಬಲ. ವಿದ್ಯಾರ್ಥಿನಿಗೆ ಸಮಾಧಾನ ಹೇಳಿ ಈ ಘಟನೆಯನ್ನು ಇಲ್ಲಿಗೆ ಮುಗಿಸಬೇಕೆಂಬ ಧಾವಂತ. ಎಲ್ಲದಕ್ಕಿಂತ ಹೆಚ್ಚಾಗಿ ಪ್ರಿನ್ಸಿ ನನಗೆ ಮಂಗಳಾರತಿ ಮಾಡುವದನ್ನು ತಪ್ಪಿಸಿಕೊಳ್ಳಬೇಕೆಂಬ ಭಯ. ಕೊನೆಗೆಧೈರ್ಯಮಾಡಿ
, "ನಾನು ಅವನಿಗೆ ಬುದ್ದಿ ಹೇಳುವೆ, ನೀವು ಸುಮ್ನೆ ಕೂರಿ ಇಲ್ಲದಿದ್ರೆ ಹೋಗಿ
Princi ಹತ್ತಿರ " ಎಂದೆ. ಆಗ ವಿದ್ಯಾರ್ಥಿನಿ
"ನೀವುಬನ್ನಿ Princi ಹತ್ತಿರ
". ಎಂದಳು. ನನಗೆಕೋಪಬಂದು
"ಕಾಡಿಸಿದವನುಯಾರು?
ಅವನೊ ಅಥವಾ ನಾನೋ? ಕಾಡಿಸಿದವನ್ನುಕರೆದುಕೊಂಡುಹೋಗಿ"ಎಂದೆ. ಈ ಮಾತು ಕೇಳಿ ಕೆಲ ಹುಡುಗರು ನಕ್ಕಿದ್ದೂ ಆಯಿತು. ಇಡೀ ತರಗತಿ ಗೊಂದಲದ ಗೂಡು. ಅಷ್ಟೊತ್ತಿಗೆ ನನ್ನ ಜಂಘಾಬಲ ಉಡುಗಿ ಹೋಗಿತ್ತು.
ಮೊದಲ ಮತ್ತು ಎರಡನೆಯ ಪೀರಿಯಡ್ ಸಾo ಗ ವಾ ಗಿ ನಡೆದ ಮೇಲೆ ಮೂರನೆಯ
History ಕ್ಲಾಸ್ನಲ್ಲಿ ಏಕೆ ಈ ವಿವಾದ? ಎಂದು. ಸದಾ ಗುನುಗುವ ಹಾಡು ಕಂಠದಲ್ಲಿ ಬಂದು
" ಬೆಳಗೆದ್ದು ನಾನು ಯಾರ ಮುಖವ ನೋಡಿದೆ, ಅಂದಾನೋ ದುರದೃಷ್ಟನೋ ಮುಂದೆ ಕೂತಿದೆ"
ಎಂಬಂತಾಯಿತು. ತಕ್ಷಣವೇ ಅಮ್ಮ ನೆ ನ ಪಾ ದಳ್ . ಕಷ್ಟಕಾಲದಲ್ಲಿ ಅವಳೊಬ್ಬಳೇ ನನ್ನ trouble shooter. ಆರೋಪ ಮಾಡಿದ ವಿದ್ಯಾರ್ಥಿನಿಯ ಕಣ್ಣುಗಳು ಕೊಳಗಳಾಗಿದ್ದವು. ನನ್ನಮಾತುಗಳು
'ಅಮ್ಮ ಬೇಸಿಗೆಯಲಿ ತಾರಸಿಯ ಮೇಲೆ ಒಣಗಲು ಇಟ್ಟ ಹಪ್ಪಳದಂತೆ' ಸಪ್ಪಗೆ ಒಣಗಿದ್ದವು. ತುಟಿಗಳೆರಡೂ ಒಂದನ್ನೊಂದು ಮುನಿಸಿಕೊಂಡಿದ್ದವು.
ಯಾಕೆಹೀಗಾಯ್ತು? ಹೀಗೆಯಾಕಾಯ್ತು? ಶಾಂತ ಸಾಗರದ ಮನಸ್ಸಿನಲ್ಲಿ ಸುನಾಮಿ ಎದ್ದಿತ್ತು. ಅಷ್ಟೊತ್ತಿಗೆ ನನ್ನ ಪೀರಿಯಡ್ಅವಧಿ ಮುಗಿಯುತ್ತಾ ಬಂದಿತ್ತು. ಎಲ್ಲ. ವಿದ್ಯಾರ್ಥಿಗಳು ಎದ್ದು ನಿಂತು ಕೈಜೋಡಿಸಿ
" ಕ್ಷಮಿಸಿಸರ್,
April Fool sir" ಎಂದರು. ಜಾರಿದ ಜೀವ ಜೊತೆಗಿದ್ದಂತೆ ಭಾಸವಾಯಿತು. “ದಂಡಿಗೆಹೆದರಿಲ್ಲ , ದಾಳಿಗೆಹೆದರಿಲ್ಲ , ಬೀಳಗಿಯವರ ಗಂಟೆಗೆ ಹೆದರುವೆನೇ “ ಎಂಬನನ್ನ Ready made
dailogue ನ್ನುಸಮರ್ಥಿಸಿ ಕೊಳ್ಳಲು ದಾರಿಯೇ ಇರಲಿಲ್ಲ.“Don ಢರ್ ಗಯಾ '' ಎಂಬ phrase ಹುಡುಗರ watsapp ಗುಂಪುಗಳಲ್ಲಿ ಹರಿದಾಡಿತು. ಅವರು ಕೊಟ್ಟಆಕಸ್ಮಿಕ ಹೊಡೆತದಿಂದ ಹೊರ ಬರಲು ನನಗೆ ಆದಿನ ಪೂರ್ಣಸಾಧ್ಯವಾಗಲೇಇಲ್ಲ.
ಇಷ್ಟೆಲ್ಲಾ ಆದಮೇಲೂ ಕಟ್ಟಕಡೆಗೆ ಉಳಿದಪ್ರಶ್ನೆ, ''ಹೀಗೂಉಂಟೇ?!!!?

Nice sir ,,, very good writing sir💐
ReplyDeleteಹೀಗೆ ಆಗಿದೆ ಸರ್ ನಿಮ್ಮ ಕಷ್ಟ
DeleteSir nivu kavigalanne mirisuttiri.good and funny writing sir
ReplyDeleteDevadu ..a piece of humorous writing..good narrative style you followed.words used are impressive. Keep writing ..all the best.
ReplyDeletesuperb sir
ReplyDeleteOsm sir
ReplyDelete